ಆಯಿಶಾ [ರ] ವರದಿ ಮಾಡುತ್ತಾರೆ - ಹಾರಿಸ್ ಬಿನ್ ಹಿಶಾಮ್ [ರ] ಅವರು ಪ್ರವಾದಿವರ್ಯರೊಡನೆ [ಸ] ಕೇಳಿದರು - ಪ್ರವಾದಿವರ್ಯರೇ! ತಮ್ಮ ಮೇಲೆ ವಹೀ (ದಿವ್ಯವಾಣೆ) ಹೇಗೆ ಬರುತ್ತದೆ? ಪ್ರವಾದಿ [ಸ] ಹೇಳಿದರು, ಕೆಲವೊಮ್ಮೆ ಘಂಟಾನಾದದೊಂದಿಗೆ ಬರುತ್ತದೆ. ಅದು ನನಗೆ ಬಹಳ ಕಠಿಣವಾಗುತ್ತದೆ. ಆಗ ದೇವಚರ ಹೇಳಿದ್ದು ನನಗೆ ಕಂಠಪಾಠವಾಗುತ್ತದೆ. ನಂತರ ಅದು ನಿಂತು ಬಿಡುತ್ತದೆ. ಇನ್ನೊ ಕೆಲವೊಮ್ಮೆ ದೇವಚರ ಪುರುಷ ರೂಪದಲ್ಲಿ ನನ್ನ ಬಳಿಗೆ ಬರುತ್ತದೆ. ಅದು ಉಚ್ಚರಿಸಿದ್ದು ನನಗೆ ಬಾಯಿ ಪಾಠವಾಗಿ ಬಿಡುತ್ತದೆ. ಆಯಿಶಾ [ರ] ಹೇಳುತ್ತಾರೆ - ಮೈ ಕೊರೆಯುವ ಚಳಿಯಲ್ಲೂ ಪ್ರವಾದಿವರ್ಯರ [ಸ] ಮೇಲೆ ದಿವ್ಯಾವಾಣೆ ಅವತೀರ್ಣಗೊಂಡು, ಅದು ನಿಂತಾಗ ಅವರ ಹಣೆಯಿಂದ ಬೆವರು ಹೊರಡುವುದನ್ನು ನಾನು ಕಂಡಿದ್ದೇನೆ.
[ಸಹೀಹ್ ಅಲ್ ಬುಖಾರಿ, ಅಧ್ಯಾಯ ಪ್ರವಾದಿ ಮುಹಮ್ಮದ್ರಿಗೆ [ಸ] ದಿವ್ಯಾವಾಣೆಯ ಅವತರಣದ ಆರಂಭ]
No comments:
Post a Comment