ವಿದ್ಯೆ ಕಲಿಯಲು ಗಂಡಿಗೂ ಹೆಣ್ಣೆಗೂ ಸಮಾನ ಪ್ರೋತ್ಸಾಹ ನೀಡಲಾಗಿದೆ. ಪ್ರವಾದಿ ಮುಹಮ್ಮದ್ [ಸ] ಹೇಳಿದರು: "ವಿದ್ಯೆ ಕಲಿಯುವುದು ಎಲ್ಲ ಮುಸ್ಲಿಮರ ಮೇಲೂ ಕಡ್ಡಾಯವಾಗಿದೆ."
ಪ್ರವಾದಿಯವರ ಕಾಲದಲ್ಲೂ ನಂತರವೂ ಅನೇಕ ಮುಸ್ಲಿಮ್ ವಿದ್ವಾಂಸೆಯರು ಅಸ್ತಿತ್ವದಲ್ಲಿದ್ದರು. ಅವರಲ್ಲಿ ಕೆಲವರು ಪ್ರವಾದಿ ಕುಟುಂಬದವರಾದರೆ ಇತರರು ಅವರ ಶಿಷ್ಯೆಯರು ಅಥವಾ ಶಿಷ್ಯರ ಹೆಣ್ಮಕ್ಕಾಳಾಗಿದ್ದರು. ಅವರಲ್ಲಿ ಪ್ರಮುಖ ಸ್ಥಾನವನ್ನು ಅಲಂಕರಿಸುವುದು ಪ್ರವಾದಿಪತ್ನಿ ಆಯಿಶಾ [ರ]. ಇಸ್ಲಾಮೀ ಕಾನೂನುಶಾಸ್ತ್ರದ
ನಾಲ್ಕನೇ ಒಂದು ಭಾಗವನ್ನು ಇವರಿಂದಲೇ ಉದ್ದರಿಸಲಾಗಿದೆ.
ಕರ್ಮಶಾಸ್ತ್ರ ವಿದ್ವಾಂಸೆಯರಾದ ಇತರ ಮಹಿಳೆಯರೂ ಇದ್ದರು. ಅವರಿಗೆ ಪುರುಷ ಶಿಷ್ಯರೂ ಇದ್ದರು.
No comments:
Post a Comment