Thursday, January 2, 2014

ನಮಾಝ್'ನಲ್ಲಿ ತಲ್ಲೀನತೆಯಿದೆ

ಅಬ್ದುಲ್ಲಾ ಬಿನ್ ಮಸ್'ಊದ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ನಮಾಝ್'ನಲ್ಲಿದ್ದಾಗ ನಾವು ಅವರಿಗೆ ಸಲಾಮ್ ಹೇಳುತ್ತಿದ್ದೆವು. ಅವರು ಅದಕ್ಕೆ ಉತ್ತರ ನೀಡುತ್ತಿದ್ದರು. ನಾವು ನಜ್ಜಾಶಿಯ ಊರಿಗೆ ಹೋಗಿ ಬಂದಾಗ ಸಲಾಮ್ ಹೇಳಿದೆವು. ಆದರೆ ನಮಗೆ ಉತ್ತರ ನೀಡಲಿಲ್ಲ. ನಾವು ಹೇಳಿದೆವು - ಅಲ್ಲಾಹನ ಸಂದೇಶವಾಹಕರೇ! ತಾವು ನಮಾಝ್'ನಲ್ಲಿದ್ದಾಗ ನಾವು ಸಲಾಮ್ ಹೇಳುತ್ತಿದ್ದೆವು. ತಾವು ಉತ್ತರಿಸುತ್ತಿದ್ದಿರಿ. ಆಗ ಪ್ರವಾದಿ [ಸ] ಹೇಳಿದರು - ಖಂಡಿತವಾಗಿಯೂ ನಮಾಝ್'ನಲ್ಲಿ ತಲ್ಲೀನತೆಯಿದೆ.

[ಬುಖಾರಿ, ಮುಸ್ಲಿಮ್]

No comments:

Post a Comment