Monday, January 20, 2014

ಎತ್ತರದ ಗೋಪುರವನ್ನು ರಚಿಸಿಕೊಡು

ಫಿರ್‌ಔನ್ ಹೇಳಿದನು; ‘‘ಓ (ಸಚಿವ) ಹಾಮಾನ್, ನನಗೊಂದು ಎತ್ತರದ ಗೋಪುರವನ್ನು ರಚಿಸಿಕೊಡು. ಆ ಮೂಲಕ ಕೆಲವು ದಾರಿಗಳನ್ನು ತಲುಪಲು ನನಗೆ ಸಾಧ್ಯವಾದೀತು’’.
‘‘ಆಕಾಶದ ಆ ದಾರಿಗಳ ಮೂಲಕ ನಾನು ಮೂಸಾರ ದೇವರೆಡೆಗೆ ಇಣುಕಿ ನೋಡುವೆನು. ನಾನಂತು ಆತ (ಮೂಸಾ)ನನ್ನು ಸುಳ್ಳುಗಾರನೆಂದೇ ಭಾವಿಸುತ್ತೇನೆ’’. ಈ ರೀತಿ ಫಿರ್‌ಔನ್‌ನ ಪಾಲಿಗೆ ಆತನ ದುಷ್ಟ ಕೃತ್ಯಗಳನ್ನು ಚಂದಗಾಣಿಸಿ ಬಿಡಲಾಯಿತು ಮತ್ತು ಅವನನ್ನು ನೇರ ಮಾರ್ಗದಿಂದ ತಡೆಯಲಾಯಿತು. ಕೊನೆಗೆ ಫಿರ್‌ಔನನ ಎಲ್ಲ ಸಂಚುಗಳೂ ವಿಫಲವಾಗಿಬಿಟ್ಟವು. 
[ಕುರಾನ್40: 36-37]

No comments:

Post a Comment