Monday, January 20, 2014

ನೀನು ನಿನ್ನ ಪತ್ನಿಯ ಜೊತೆ ಹಜ್ಜ್ ಯಾತ್ರೆಗೆ ಹೋಗು

ಇಬ್ನು ಅಬ್ಬಾಸ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ವಿವಾಹ ನಿಷಿದ್ದರಲ್ಲದ ಸ್ತ್ರೀ ಮತ್ತು ಪುರುಷ ಇಬ್ಬರೂ ಏಕಾಂತದಲ್ಲಿ ಒಟ್ಟಿಗಿರಬಾರದು. ಯಾವ ಮಹಿಳೆಯೂ ವಿವಾಹ ನಿಷಿದ್ದ ಸಂಬಂಧಿಕರಿಲ್ಲದೆ ಪ್ರಯಾಣ ಮಾಡಬಾರದು. ಇದನ್ನು ಕೇಳಿದಾಗ ಒಬ್ಬ ವ್ಯಕ್ತಿ ಎದ್ದು ನಿಂತು, ಯಾ ರಸೂಲಲ್ಲಾಹ್! ನಾನು ಇಂತಿಂತಹ ಜಿಹಾದ್'ಗೆ ಹೆಸರು ಬರೆಸಿದ್ದೇನೆ. ಅತ್ತ ನನ್ನ ಪತ್ನಿ ಹಜ್ಜ್ ಯಾತ್ರೆ ಕೈಗೊಳ್ಳಬಯಸಿದ್ದಾಳೆ ಎಂದನು. ಪ್ರವಾದಿ [ಸ] ಹೇಳಿದರು - ನೀನು ನಿನ್ನ ಪತ್ನಿಯ ಜೊತೆ ಹಜ್ಜ್ ಯಾತ್ರೆಗೆ ಹೋಗು. 
[ಸಹೀಹ್ ಬುಖಾರಿ, ಅಧ್ಯಾಯ ಧರ್ಮ ಯುದ್ದ [ಜಿಹಾದ್]]    

No comments:

Post a Comment