ಅಬೂ ಹುರೈರಾ [ರ] ಹೇಳುತ್ತಾರೆ
- ಪ್ರವಾದಿ [ಸ] ಹೇಳಿದರು: ಅಲ್ಲಾಹನು ಒಬ್ಬ ದಾಸನನ್ನು ಪ್ರೀತಿಸತೊಡಗಿದರೆ ಜಿಬ್ರೀಲರನ್ನು ಕರೆದು
ಹೇಳುವನು - ನಾನು ಇಂತಿಂತಹ ದಾಸನನ್ನು ಪ್ರೀತಿಸುತ್ತೇನೆ. ನೀನೂ ಅವನನ್ನು ಪ್ರೀತಿಸು. ಜಿಬ್ರೀಲ್
ಅವನನ್ನು ಪ್ರೀತಿಸತೊಡಗುವನು. ತರುವಾಯ ಜಿಬ್ರೀಲ್ ಆಕಾಶದಲ್ಲಿರುವವರೊಂದಿಗೆ ಹೇಳುವರು - ಖಂಡಿತವಾಗಿಯೂ
ಅಲ್ಲಾಹನು ಇಂತಿಂತಹ ವ್ಯಕ್ತಿಯನ್ನು ಪ್ರೀತಿಸುತ್ತಾನೆ. ಆದ್ದರಿಂದ ನೀವೂ ಅವನನ್ನು ಪ್ರೀತಿಸಿರಿ.
ಹಾಗೆ, ಆಕಾಶದಲ್ಲಿರುವವರು ಅವನನ್ನು ಪ್ರೀತಿಸುವರು. ಆ ಬಳಿಕ ಭೂಮಿಯಲ್ಲಿ ಅವನು
ಜನಪ್ರಿಯನಾಗುತ್ತಾನೆ.
[ಸಹೀಹ್ ಬುಖಾರಿ, ಅಧ್ಯಾಯ ಸ್ರಷ್ಟಿಯ ಆರಂಭ]
No comments:
Post a Comment