Thursday, January 2, 2014

ಎಚ್ಚರಿಕೆ!

ಇಬ್ನ್ ಉಮರ್ [ರ]ರವರಿಂದ ವರದಿ: ಅಲ್ಲಾಹನ ಸಂದೇಶವಾಹಕರು [ಸ] ಹೇಳಿದರು: ಒಬ್ಬನು ತನ್ನ ಸಹೋದರನನ್ನು ಕಾಫಿರ್ [ಸತ್ಯ ನಿಷೇಧಿ] ಎಂದು ಕರೆದರೆ ಅದು ಅವರಲ್ಲೋರ್ವರಿಗೆ ಸೇರುತ್ತದೆ. ಕರೆಯಲ್ಪಟ್ಟವನು ಹಾಗಿದ್ದರೆ ಕರೆದವನಿಗೆ ನಷ್ಟವಿಲ್ಲ. ಕರೆಯಲ್ಪಟ್ಟವನು ಹಾಗಿರದಿದ್ದಲ್ಲಿ ಆ ಪ್ರಯೋಗವು ಕರೆದವನಿಗೇ ಸೇರುತ್ತದೆ. 
[ಬುಖಾರಿ, ಮುಸ್ಲಿಮ್]
ಅಬೂದರ್ [ರ]ರಿಂದ ವರದಿ: ಪ್ರವಾದಿ [ಸ] ಹೇಳಿದರು, ಒಬ್ಬನು ಇನ್ನೊಬ್ಬನನ್ನು ಕಾಫಿರ್ ಅಥವಾ ಅಲ್ಲಾಹನ ಶತ್ರುವೆಂದು ಕರೆದರೆ ಕರೆಯಲ್ಪಟ್ಟವನು ಹಾಗಿಲ್ಲದಿದ್ದರೆ ಆ ಪದವು ಕರೆದವನಿಗೇ ಅನ್ವಯವಾಗುವುದು. 

[ಬುಖಾರಿ, ಮುಸ್ಲಿಮ್]

No comments:

Post a Comment