ಫಾತಿಮಾ [ರ]ರವರು ಪ್ರವಾದಿಗಳ ನಾಯಕ ಮುಹಮ್ಮದ್ [ಸ]ರವರ
ಅತ್ಯಂತ ಕಿರಿಯ ಮಗಳಾಗಿದ್ದರು. ಪ್ರವಾದಿ [ಸ]ರವರು ಅವರನ್ನು ಅತೀ ಹೆಚ್ಚು ಪ್ರೀತಿಸುತ್ತಿದ್ದರು.
ಆದ್ದರಿಂದಲೇ ಪ್ರವಾದಿ [ಸ]ರವರು ಅವರಿಗೆ ಬಹಳಷ್ಟು ಸುವಾರ್ತೆಯನ್ನು ನೀಡಿರುವರು.
ಆಯಿಷಾ [ರ]ರವರು ಹೇಳುತ್ತಾರೆ, ಪ್ರವಾದಿ [ಸ]ರವರ ಪತ್ನಿಯರೆಲ್ಲರೂ ಅವರ ಬಳಿ ಕುಳಿತಿದ್ದರು. ಅವರಲ್ಲಿ ಯಾರೂ ಕೂಡಾ
ತಮ್ಮ ಮನೆಗಳಿಗೆ ಹೋಗಿರಲಿಲ್ಲ. ಆ ಸಂದರ್ಭದಲ್ಲಿ ಫಾತಿಮಾ [ರ]ರವರು ನಡೆದುಕೊಂಡು ಬಂದರು. ಅವರು
ನಡೆಯುವ ಶೈಲಿಯು ಪ್ರವಾದಿ [ಸ]ರವರ ಶೈಲಿಗೆ ಬಹಳಷ್ಟು ಹೊಂದಾಣೆಕೆಯಾಗುತ್ತಿತ್ತು. ಪ್ರವಾದಿ
[ಸ]ರವರು ಅವರನ್ನು ನೋಡಿ ಹೇಳಿದರು.
"ನನ್ನ ಮಗಳೇ! ಸುಸ್ವಾಗತ" ನಂತರ
ಪ್ರವಾದಿ [ಸ]ರವರು ಅವರನ್ನು ತನ್ನ ಬಲಭಾಗ [ಅಥವಾ ಎಡ]ದಲ್ಲಿ ಕೂರಿಸಿದರು. ಅವರೊಂದಿಗೆ ಗುಪ್ತವಾಗಿ
ಒಂದು ಮಾತನ್ನು ಹೇಳಿದರು. ಆ ಮಾತನ್ನು ಕೇಳಿದೊಡನೆ ಅವರು ತುಂಬಾ ಅಳಲಾರಂಭಿಸಿದರು. ಪ್ರವಾದಿ [ಸ]
ಅವರ ದುಃಖವನ್ನು ಕಂಡು ಅವರನ್ನು ಸಮಾಧಾನಿಸಲು ಅವರೊಂದಿಗೆ ಗುಪ್ತವಾಗಿ ಮತ್ತೊಂದು ಮಾತನ್ನು
ಹೇಳಿದರು. ಆ ಮಾತಿನಿಂದ ಅವರ ಮುಖದಲ್ಲಿ ನಗು ಅರಳಿತು.
ನಂತರ ನಾನು ಅವರಲ್ಲಿ ಕೇಳಿದೆ, ಪ್ರವಾದಿ [ಸ]ರವರು ನಿಮ್ಮೊಂದಿಗೆ ಗುಪ್ತವಾಗಿ ಹೇಳಿದ್ದೇನು? ಅವರು
ಹೇಳಿದರು, ನಾನು ಪ್ರವಾದಿ [ಸ]ರವರ ಗುಪ್ತ ಮಾತುಗಳನ್ನು
ಬಹಿರಂಗಹೊಲಿಸುವವಳಲ್ಲ. ಆಯಿಷಾ [ರ]ರವರು ಹೇಳುತ್ತಾರೆ, ಪ್ರವಾದಿ
[ಸ]ರವರ ಮರಣ ಹೊಂದಿದಾಗ ನಾನು ಹೇಳಿದೆ "ಫಾತಿಮಾ! ನಾನು ಆಣೆ ಹಾಕಿ ಹೇಳುತ್ತೇನೆ. ನನಗೆ
ನಿಮ್ಮ ಮೇಲೆ ಕೆಲವು ಹಕ್ಕು ಭಾಧ್ಯತೆಗಳಿವೆ. ಆದ್ದರಿಂದ ಪ್ರವಾದಿ [ಸ]ರವರು ನಿಮ್ಮೊಂದಿಗೆ
ಗುಪ್ತವಾಗಿ ಆಡಿದ ಮಾತನ್ನು ನನಗೆ ತಿಳಿಸಲೇಬೇಕು.
ಆಗ ಅವರು ಹೇಳಿದರು, "ಸರಿ ಈಗ ಹೇಳುತ್ತೇನೆ, ಮೊದಲ ಬಾರಿ ಪ್ರವಾದಿ [ಸ]ರವರು
ನನ್ನೊಂದಿಗೆ ಈ ರೀತಿ ಹೇಳಿದರು. "ಜಿಬ್ರೀಲ್ [ಅ]ರವರು ಪ್ರತಿವರ್ಷವೂ ಒಂದು ಸಲ ಕುರಾನಿನ
ಆವರ್ತನೆಗಾಗಿ ಬರುತ್ತಿದ್ದರು. ಈ ವರ್ಷ ಎರಡು ಬಾರಿ ಬಂದಿದ್ದರು. ನನ್ನ ಮರಣವು ಸಮೀಪವಿದೆಯೆಂದು
ನಾನು ತಿಳಿಯುತ್ತೇನೆ. ಆದ್ದರಿಂದ ನಾನು ಅಲ್ಲಾಹನನ್ನು ಭಯ ಪಡುತ್ತಿರಬೇಕು. ಹಾಗೂ ಸಹನೆ
ಕೈಗೊಳ್ಳುತ್ತಿರಬೇಕು . ಏಕೆಂದರೆ ನಾನು ನಿನಗಿಂತ ಮೊದಲು ಹೊರಡುವವನಾಗಿದ್ದೀನೆ. ಇದನ್ನು ಕೇಳಿ
ನಾನು ಅಳಲಾರಂಭಿಸಿದೆ. ಫಾತಿಮಾ! ನೀನು ಎಲ್ಲಾ ಮುಸ್ಲಿಮ್ ಸ್ತ್ರೀಯರ ಯಜಮಾನಿಯಾಗುವುದನ್ನು ಇಷ್ಟ
ಪಡುವುದಿಲ್ಲವೇ?" ಅಥವಾ ಪ್ರವಾದಿ [ಸ]ರವರು ಹೇಳಿದರು, ನೀನು ಈ ಸಮುದಾಯದ ಸ್ತ್ರೀಯರ ಒಡತಿಯಾಗಿರುವಿ. ಇದನ್ನು ಕೇಳಿ ನಾನು ಸಂತೋಷಗೊಂಡೆನು.
[ಬುಖಾರಿ, ಮುಸ್ಲಿಮ್]
No comments:
Post a Comment