ಅಬೂ
ಮೂಸ[ರ] ವರದಿ ಮಾಡುತ್ತಾರೆ,
"ಪ್ರವಾದಿ [ಸ]
ರವರು ಒಂದು ತೋಟದಲ್ಲಿ ಪ್ರವೇಶಿಸಿದರು ಮತ್ತು ನನ್ನನ್ನು ಅದರ ಕಾವಲುಗಾರನಾಗಿ ನಿಂತಿರುವಂತೆ
ಹೇಳಿದರು. ಅದರಂತೆ ಒಬ್ಬ ವ್ಯಕ್ತಿಯು ಬಂದು ಬಳಿಗೆ ಹೋಗಲು ಅನುಮತಿ ಕೇಳಿದರು. ಪ್ರವಾದಿ [ಸ]ರವರು
ಹೇಳಿದರು. "ಅವರಿಗೆ ಅನುಮತಿ ನೀಡಿರಿ, ಮತ್ತು
ಸ್ವರ್ಗದ ಸುವಾರ್ತೆಯನ್ನೂ ನೀಡಿರಿ," ನಾನು
ನೋಡಿದಾಗ ಅವರು ಅಬೂ ಬಕ್ಕರ್ [ರ]ರವರಾಗಿದ್ದರು.
ನಂತರ
ಇನ್ನೋರ್ವ ವ್ಯಕ್ತಿಯು ಬಂದರು. ಅವರು ಕೂಡಾ ಒಳಗೆ ಪ್ರವೇಶಿಸುವುದಕ್ಕೆ ಅನುಮತಿ ಕೇಳಿದರು.
ಪ್ರವಾದಿ [ಸ]ರವರು ಹೇಳಿದರು. "ಅವರಿಗೆ ಅನುಮತಿ ನೀಡಿರಿ, ಮತ್ತು ಅವರಿಗೂ ಸ್ವರ್ಗದ ಸುವಾರ್ತೆಯನ್ನೂ
ನೀಡಿರಿ," ನಾನು
ನೋಡಿದಾಗ ಅವರು ಉಮರ್ [ರ]ರವರಾಗಿದ್ದರು.
ನಂತರ
ಮತೋರ್ವ ವ್ಯಕ್ತಿಯು ಬಂದರು ಅವರು ಕೂಡಾ ಒಳಗೆ ಪ್ರವೇಶಿಸುವುದಕ್ಕೆ ಅನುಮತಿ ಕೇಳಿದರು. ಪ್ರವಾದಿ
[ಸ]ರವರು ಹೇಳಿದರು. "ಅವರಿಗೆ ಅನುಮತಿ ನೀಡಿರಿ, ಮತ್ತು
ಅವರಿಗೂ ಸ್ವರ್ಗದ ಸುವಾರ್ತೆಯನ್ನೂ ನೀಡಿರಿ ಅವರ ಮೇಲೆ ಎರಗಲಿರುವ ಒಂದು ಆಪತ್ತಿನ ಕುರಿತು
ಎಚ್ಚರಿಸಿರಿ." ನಾನು ನೋಡಿದಾಗ ಅವರು ಉಸ್ಮಾನ್ [ರ]ರವರಾಗಿದ್ದರು.
[ಬುಖಾರಿ, ಮುಸ್ಲಿಮ್]
No comments:
Post a Comment