Wednesday, March 26, 2014

ಔಲಿಯಾಗಳು ಯಾರೊಂದಿಗೆ ಪ್ರಾರ್ಥಿಸಿದರು?

ಪ್ರವಾದಿಗಳ ಪ್ರಾರ್ಥನೆಯ ಮಾದರಿಯ ಜೊತೆಗೆ ಕೆಲವು ಔಲಿಯಾಗಳ ಪ್ರಾರ್ಥನೆಗಳನ್ನು ಕೂಡಾ ಕುರಾನ್ ಉಲ್ಲೇಖಿಸುತ್ತದೆ. ಅವರು ಕೂಡಾ ಯಾವ ಪ್ರವಾದಿಗಳೊಂದಿಗಾಗಲೀ ಇತರರೊಂಡಿಗಾಗಲೀ ಪ್ರಾರ್ಥಿಸಿರಲಿಲ್ಲ. ಬದಲಾಗಿ, ಶಿಫಾರಸ್ಸುದಾರರು ಮತ್ತು ಮಧ್ಯವರ್ತಿಗಳಿಲ್ಲದೆ ಅಲ್ಲಾಹನೊಂದಿಗೆ ಮಾತ್ರ ಪ್ರರ್ಥಿಸಿದ್ದರು.

ಉದಾಹರಣೆಗೆ "ಅಸ್ ಹಾಬುಲ್ ಕಹ್ಫ್" ಕುರಾನ್ ಪರಿಚಯಿಸಿದ ಔಲಿಯಾಗಳಷ್ಟೇ. ಶತ್ರುಗಳಿಂದ ರಕ್ಷಣೆ ಪಡೆಯಲು ಒಂದು ಗುಹೆಯಲ್ಲಿ ಅಭಯ ಪಡೆದ ಅವರು ಆತ್ಮರಕ್ಷಣೆಗಾಗಿ ಮಾಡಿದ ಪ್ರಾರ್ಥನೆಯನ್ನು ಕುರಾನ್ ಹೀಗೆ ಉಲ್ಲೇಖಿಸುತ್ತದೆ.

ಆ ಯುವಕರು ಒಂದು ಗುಹೆಯಲ್ಲಿ ಆಶ್ರಯ ಪಡೆದಿದ್ದರು ಮತ್ತು, ‘‘ನಮ್ಮೊಡೆಯಾ, ನಿನ್ನ ಬಳಿಯಿಂದ ನಮಗಾಗಿ ವಿಶೇಷ ಅನುಗ್ರಹವನ್ನು ಕರುಣಿಸು ಮತ್ತು ನಮ್ಮ ಸನ್ನಿವೇಶವನ್ನು ಸುಲಭಗೊಳಿಸು’’ ಎಂದು ಪ್ರಾರ್ಥಿಸಿದ್ದರು. 
[ಕುರಾನ್, 18: 10]

No comments:

Post a Comment