Friday, March 28, 2014

ನೆಬಿ [ಸ]ರವರು ಉಮರ್ [ರ]ರವರ ಭವನವನ್ನು ಸ್ವರ್ಗದಲ್ಲಿ ನೋಡಿರುವರು

ಅಬೂ ಹುರೈರಾ [ರ]ರವರು ಹೇಳುತ್ತಾರೆ, ಪ್ರವಾದಿ [ಸ]ರವರು ಹೇಳಿರುವರು, ನಾನು ಕನಸಿದನಲ್ಲಿ ಸ್ವರ್ಗದಲ್ಲಿರುವುದನ್ನು ಕಂಡೆನು. ಒಬ್ಬಳು ಸ್ತ್ರೀಯು ಒಂದು ಭವನದ ಮೂಲೆಯಲ್ಲಿ ಕುಳಿತು ವುಝೂ ಮಾಡುತ್ತಿದ್ದಳು. ನಾನು ಕೇಳಿದೆ ಈ ಭವನವು ಯಾರದ್ದು? ಆಗ ದೇವಚರರು ಉತ್ತರಿಸಿದರು. ಇದು ಉಮರ್ ಬಿನ್ ಖತ್ತಾಬ್ [ರ]ರವರದ್ದಾಗಿದೆ. ಉಮರ್ [ರ]ರವರ ಹಿರಿಮೆಯನ್ನು ಕಂಡು ನಾನು ಅಲ್ಲಿಂದ ಹೊರಟು ಹೋದೆ. 
[ಬುಖಾರಿ, ಮುಸ್ಲಿಮ್]

No comments:

Post a Comment