Monday, March 10, 2014

ಇಹ್ಸಾನ್

ಆರಾಧನಾ ಕರ್ಮಗಳನ್ನು ನಿರ್ವಹಿಸುವಾಗ ಸಂಪೂರ್ಣವಾಗಿ ಅಲ್ಲಾಹನ ಕಡೆಗೆ ಗಮನ ಕೆಂದ್ರೀಕರಿಸುವುದು ಇಹ್ಸಾನ್ ಆಗಿದೆ. ಅಲ್ಲಾಹು ಹೇಳುತ್ತಾನೆ.

ನೀವು ಏಳುವಾಗ ಅವನು ನಿಮ್ಮನ್ನು ನೋಡುತ್ತಿರುತ್ತಾನೆ. ಮತ್ತು ಸಾಷ್ಟಾಂಗವೆರಗುವವರ ಮಧ್ಯೆ ನಿಮ್ಮ ಚಲನ-ವಲನಗಳ ಮೇಲೆ ಕಣ್ಣಿಟ್ಟಿರುತ್ತಾನೆ.
[ಕುರಾನ್, ೨೬: ೨೧೮, ೨೧೯]

ಇಹ್ಸಾನ್ ಎಂದರೆ ನೀವು ಅಲ್ಲಾಹನನ್ನು ನೋಡುತ್ತಿದ್ದೀರೆಂಬ ಭಾವನೆಯೊಂದಿಗೆ ಅವನ ಆರಾಧನೆಗಳನ್ನು ನಿರ್ವಹಿಸುವುದಾಗಿದೆ. ನೀವು ಅವನನ್ನು ಕಾಣದಿದ್ದರೂ ಅವನು ನಿಮ್ಮನ್ನು ನೋಡುತ್ತಿರುತ್ತಾನೆ. 
[ಮುಸ್ಲಿಮ್]

No comments:

Post a Comment