Saturday, March 29, 2014

ಸ್ವರ್ಗದ ಸ್ತ್ರೀಯರ ನಾಯಕಿ

ಹುದೈಫಾ [ರ]ರವರು ವರದಿ ಮಾಡುತ್ತಾರೆ. ಪ್ರವಾದಿ [ಸ]ರವರು ಹೇಳಿರುವರು. "ನಿಶ್ಚಯವಾಗಿಯೂ ಈ ದೇವಚರರು ಇಂದು ರಾತ್ರಿ ಭೂಮಿಯಲ್ಲಿ ಬಂದಿಳಿದರು ಹಾಗೂ ಇದಕ್ಕಿಂತ ಮುಂಚೆ ಇವರು ಎಂದೂ ಭೂಮಿಯಲ್ಲಿ ಬಂದಿಳಿದಿರಲಿಲ್ಲ. ಅವರು ನನ್ನನ್ನು ಬೇಟಿ ಮಾಡಲು ಅಲ್ಲಾಹುನೊಂದಿಗೆ ಅನುಮತಿಯನ್ನು ಕೇಳಿದರು. ಆಗ ಅಲ್ಲಾಹನು ಫಾತಿಮಾ [ರ]ರವರು ಸ್ವರ್ಗದ ಸ್ತ್ರೀಯರ ನಾಯಕಿಯಾಗುವರೆಂದು ಹಾಗೂ ಹಸನ್ [ರ]ರವರು ಸ್ವರ್ಗದ ಯುವಕರ ಸರದಾರರಾಗುವರೆಂದು ನನಗೆ ಆ ದೇವಚರರೊಡನೆ ಸುವಾರ್ತೆಯನ್ನು ನೀಡಿ ಕಳುಹಿಸಿದನು. 
[ತಿರ್ಮಿದಿ, ಅಲ್ಬಾನಿರವರು ಸಹೀಹ್ ಎಂದಿರುವರು]

No comments:

Post a Comment