Friday, March 28, 2014

ಫಾತಿಮಾ [ರ]ರವರು ಪ್ರವಾದಿ [ಸ]ರವರ ರೂಪ

ಆಯಿಷಾ [ರ]ರವರು ಹೇಳುತ್ತಾರೆ, ಫಾತಿಮಾ [ರ]ರವರು ಪ್ರವಾದಿ [ಸ]ರವರ ರೂಪ, ಅತ್ಯುನ್ನತ ಗುಣವಿಶೇಷತೆ ಮತ್ತು ಅವರ ಉತ್ತಮ ಸ್ವಭಾವ ಬಹಳಷ್ಟು ಹೋಲಿಕೆಯುಳ್ಳವರಾಗಿದ್ದರು. ಹಾಗೂ ಅವರ ಮಾತಿನ ಶೈಲಿಯ ಪ್ರವಾದಿ [ಸ]ರವರ ಮಾತಿನ ಶೈಲಿಯಂತಿತ್ತು. ಅವರು ಪ್ರವಾದಿ [ಸ]ರವರ ಕಡೆಗೆ ಬರುವಾಗ ಪ್ರವಾದಿ [ಸ]ರವರು ಅವರ ಕಡೆಗೆ ನಡೆದು ಹೋಗುತ್ತಿದ್ದರು ಹಾಗೂ ಅವರನ್ನು ಸ್ವಾಗತಿಸುತ್ತಿದ್ದರು. ನಂತರ ಅವರ ಕೈ ಹಿಡಿದು ಚುಂಬಿಸಿ ಅವರನ್ನು ತನ್ನ ಪಕ್ಕದಲ್ಲಿ ಕೂರಿಸಿದರು. ಇದೇ ರೀತಿ ಪ್ರವಾದಿ [ಸ]ರವರು ಕೂಡಾ ಅವರ ಬಳಿ ಹೋದಾಗ ಅವರು ಕೂಡಾ ಪ್ರವಾದಿ [ಸ]ರವರ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಹಾಗೂ ಅವರನ್ನು ಸ್ವಾಗತಿಸುತ್ತಿದ್ದರು. ನಂತರ ಅವರ ಕೈ ಹಿಡಿದು ಚುಂಬಿಸಿ ಅವರನ್ನು ತನ್ನ ಪಕ್ಕದಲ್ಲಿ ಕೂರಿಸುತ್ತಿದ್ದರು. 
[ಅಬೂ ದಾವೂದ್, ತಿರ್ಮಿದಿ, ಅಲ್ಬಾನಿಯವರು ಸಹೀಹ್ ಎಂದಿರುವರು]  

No comments:

Post a Comment