Thursday, September 12, 2013

ಅತ್ಯುತ್ತಮ ದಾನ ಧರ್ಮ


ಪ್ರವಾದಿ [ಸ] ಹೇಳಿದರು: ಒಂದು ದೀನಾರನ್ನು ನೀವು ಅಲ್ಲಾಹನ ಮಾರ್ಗದಲ್ಲಿ (ಹೋರಾಟದಲ್ಲಿ) ಖರ್ಚು ಮಾಡುತ್ತಿರಿ. ಒಂದು ದೀನಾರನ್ನು ನೀವು ಜೀತ ವಿಮುಕ್ತಿಗೆ ಖರ್ಚು ಮಾಡುತ್ತಿರಿ. ಒಂದು ದೀನಾರನ್ನು ನೀವು ಬಡವರಿಗೆ ದಾನ ಮಾಡಲು ಖರ್ಚು ಮಾಡುತ್ತಿರಿ ಮತ್ತು ಒಂದು ದೀನಾರನ್ನು ನೀವು ನಿಮ್ಮ ಮನೆಮಂದಿಯ ಮೇಲೆ ಖರ್ಚು ಮಾಡುತ್ತಿರಿ. ಆ ಪೈಕಿ ಅತ್ಯಧಿಕ ಪುಣ್ಯವಿರುವುದು ನೀವು ನಿಮ್ಮ ಮನೆಮಂದಿಗೆ ಖರ್ಚು ಮಾಡುವ ದೀನಾರ್'ಗಾಗಿದೆ.
                                                                                                  [ಮುಸ್ಲಿಮ್]    


ಪ್ರವಾದಿ [ಸ] ಹೇಳಿದರು: ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಂದು ದಿರ್ಹಮ್ ಖರ್ಚುಮಾಡಿದರೆ ಅವನು ಸಾಯುವ ವೇಳೆ ನೂರು ದಿರ್ಹಮ್ ಖರ್ಚು ಮಾಡುವುದಕ್ಕಿಂತ ಉತ್ತಮವಾಗಿದೆ.
                                                                                                 [ಅಬೂ ದಾವೂದ್]

No comments:

Post a Comment