Thursday, September 12, 2013

ಅಕೀಕ:


ಅಕೀಕ ಅಂದರೆ ಪ್ರಾಣೆಗಳ ಬಲಿಯನ್ನು ಕೊಡುವುದು, ನವ ಶಿಸುವಿನ ಜನನದ ಏಳನೇ ದಿವಸದಂದು. ಯಾರಿಗೆ ಅಕೀಕದ ಸಾಮರ್ಥ್ಯ ವಿದೆಯೋ ಅವರು ಇದನ್ನು ತಡ ಮಾಡದೆ ನಿರ್ವಹಿಸಬೇಕು: ಎರಡು ಆಡು ಗಂಡು ಮಗುವಿಗೆ ಮತ್ತು ಒಂದು ಆಡು ಹೆಣ್ಣು ಮಗವಿಗೆ.

ಇದಲ್ಲದೆ ಮಗುವಿನ ತಲೆಯ ಕೂದಲನ್ನು ತೆಗೆಯಬೇಕು, ಮಗುವಿನ ಕೂದಲಿನ ಬಾರದಷ್ಟು ಬೆಳ್ಳಿಯನ್ನು ಅಥವಾ ಅದರ ಮೌಲ್ಯವನ್ನು ಮಗವಿನ ಹೆಸರಲ್ಲಿ ಕೊಡಬೇಕು.

ನವ ಜನಿಸಿದ ಶಿಸುವಿನ ನಾಮಕರಣ ಮಾಡಬೇಕು. ಮಗುವಿಗೆ ಒಳ್ಳೆಯ ಅರ್ಥ ಪೂರ್ಣ ಹಸರಿದಬೇಕು. ಪ್ರವಾದಿ [ಸ] ಹೇಳಿದ್ದಾರೆ: ಅಲ್ಲಾಹನಿಗೆ ಅತ್ಯಂತ ಪ್ರೀತಿಯ ಹೆಸರುಗಳು ಅಬ್ದುಲ್ಲಾ ಮತ್ತು ಅಬ್ದುಲ್ ರಹ್ಮಾನ್ ಎಂದು.

No comments:

Post a Comment