Friday, September 13, 2013

ವಿಸ್ವಾಸದ ರುಚಿ


ಪ್ರವಾದಿ [ಸ] ಹೇಳಿದರು: ಅಲ್ಲಾಹನನ್ನು ತನ್ನ ಪಭುವಾಗಿ, ಇಸ್ಲಾಮನ್ನು ತನ್ನ ಧರ್ಮವಾಗಿ ಮತ್ತು ಮುಹಮ್ಮದರನ್ನು ತನ್ನ ಪ್ರವಾದಿಯಾಗಿ ಸಂತೃಪ್ತಿನಾದವನು ವಿಶ್ವಾಸದ ರುಚಿಯನ್ನು ಅನುಭವಿಸಿದನು.
                                                                  [ಮುಸ್ಲಿಮ್]  

ನನ್ನ ಸೋದರ ಮಾವ ಹರಾಮ್ ಬಿನ್ ಮಿಲ್ ಹಾನ್ ಬಿಅರ್ ಮಊನದ ದಿನ ಈಟಿಯ ಹೊಡೆತದಿಂದ ಹುತಾತ್ಮರಾದಾಗ ತಮ್ಮ ರಕ್ತವನ್ನು ತಮ್ಮ ಕೈಯಿಂದ ಮುಖ ಮತ್ತು ತಲೆಗೆ ಸವರುತ್ತಾ ಹೀಗೆ ಹೇಳಿದರು - "ಕಅಬಾದ ಪ್ರಭುವಿನ ಆಣೆ ನಾನು ವಿಜಯಿಯಾದೆ.
                                                                  [ಬುಖಾರಿ]

ಉಹುದ್ ಯುದ್ದದ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಪ್ರವಾದಿವರ್ಯರಲ್ಲಿ [ಸ] ಹೀಗೆ ವಿಚಾರಿಸಿದ - "ನಾನು ವಧಿಸಲ್ಪಟ್ಟರೆ ಎಲ್ಲಿಗೆ ಹೋಗುವೆನು?" ಪ್ರವಾದಿ [ಸ] ಹೇಳಿದರು - "ಸ್ವರ್ಗಕ್ಕೆ." ಇದನ್ನು ಕೇಳಿದ ಆ ವ್ಯಕ್ತಿ ತನ್ನ ಕೈಯಲ್ಲಿದ್ದ ಖರ್ಜೂರಗಳನ್ನು ಎಸೆದು ಹೋರಾಡುತ್ತಾ ಮದಿದರು.
                                                                  [ಬುಖಾರಿ, ಮುಸ್ಲಿಮ್]

ಪ್ರವಾದಿ [ಸ] ಹೇಳಿದರು: "ನಾನು ಒಬ್ಬನಿಗೆ ಅವನ ತಂದೆ, ಅವನ ಮಕ್ಕಳು ಮತ್ತು ಎಲ್ಲ ಮನುಷ್ಯರಿಗಿಂತ ಹೆಚ್ಚು ಪ್ರಿಯವಾಗುವ ತನಕ ನಿಮ್ಮ ಪೈಕಿ ಯಾರೂ ವಿಶ್ವಾಸಿಯಾಗಲಾರರು.
                                                                  [ಬುಖಾರಿ, ಮುಸ್ಲಿಮ್]  

No comments:

Post a Comment