ಪ್ರವಾದಿ [ಸ] ಹೇಳಿದರು:
ಉತ್ತಮ ಕನಸು ಅಲ್ಲಾಹನ ವತಿಯಿಂದ ಆಗಿರುತ್ತದೆ
ಮತ್ತು ಗೊಂದಲಮಯ ಕನಸು ಶೈತಾನನ ಕಡೆಯಿಂದಾಗಿರುತ್ತದೆ.
[ಬುಖಾರಿ, ಮುಸ್ಲಿಮ್]
ಪ್ರವಾದಿ [ಸ] ಹೇಳಿದರು:
ಅಲ್ಲಾಹನು ಒಬ್ಬ ದಾಸನನ್ನು ಪ್ರೀತಿಸಿದರೆ ಜಿಬ್'ರಿಲ್'ರನ್ನು [ಅ] ಕರೆದು ಹೀಗೆ
ಹೇಳುತ್ತಾನೆ - ನಾನು ಇಂತಿಂತಹ ದಾಸನನ್ನು ಪ್ರೀತಿಸುತ್ತೇನೆ. ನೀವೂ ಅವನನ್ನು ಪ್ರೀತಿಸಿರಿ.
ಅನಂತರ ಜೀಬ್'ರೀಲರೂ [ಅ] ಅವನನ್ನು ಪ್ರೀತಿಸುತ್ತಾನೆ ಮತ್ತು ಆಕಾಶದಲ್ಲಿ ಹೀಗೆ ಘೋಷಿಸುತ್ತಾರೆ
- ಅಲ್ಲಾಹನು ಇಂತಿಂತಹ ವ್ಯಕ್ತಿಯನ್ನು ಪ್ರೀತಿಸುತ್ತಾನೆ. ನೀವೂ ಅವನನ್ನು ಪ್ರೀತಿಸಿರಿ. ಅನಂತರ
ಆಕಾಶದವರು (ದೇವಚರರು) ಅವನನ್ನು ಪ್ರೀತಿಸುತ್ತಾರೆ. ತರುವಾಯ ಅವನ ಜನಪ್ರಿಯತೆ ಭೂಮಿಗೆ
ಇಳಿಯುತ್ತದೆ. (ಅರ್ಥಾತ್ ಭುಮಿಯವರೂ ಅವನನ್ನು ಪ್ರೀತಿಸ ತೊಡಗುತ್ತಾರೆ). ಅಲ್ಲಾಹನು ಯಾರಾನ್ನಾದರೂ
ದ್ವೇಷಿಸಿದರೆ ಜೀಬ್'ರೀಲ್'ರನ್ನು (ಅ) ಕರೆದು ಹೀಗೆ ಹೇಳುತ್ತಾನೆ, ನಾನು ಇಂತಿಂತಹ ವ್ಯಕ್ತಿಯನ್ನು
ದ್ವೇಷಿಸುತ್ತಾರೆ. ತರುವಾಯ ಆಕಾಶದವರಲ್ಲಿ ಘೋಷಿಸುತ್ತಾರೆ. ಅಲ್ಲಾಹನು ಇಂತಿಂತಹ ವ್ಯಕ್ತಿಯನ್ನು
ದ್ವೇಷಿಸುತ್ತಾನೆ. ಅನಂತರ ಅವರೂ ಅವನನ್ನು ದ್ವೇಷಿಸತೊಡಗುತ್ತಾರೆ. ಅನಂತರ ಭೂಮಿಯಲ್ಲೂ ಅವನಿಗೆ
ದ್ವೇಷವು ಇಳಿಯುತ್ತದೆ.
[ಮುಸ್ಲಿಮ್]
ಪ್ರವಾದಿವರ್ಯರು [ಸ] ಹೀಗೆ ವಿಚಾರಿಸಲಾಯಿತು: ಒಬ್ಬ ವ್ಯಕ್ತಿ ಉತ್ತಮ
ಕರ್ಮಗಳನ್ನು ಮಾಡುತ್ತಾನೆ ಮತ್ತು ಜನರು ಅವನನ್ನು ಹೊಗಳುತ್ತಾರೆ. ಅವನ ಕುರಿತು ತಮ್ಮ
ಅಭಿಪ್ರಾಯವೇನು? ಪ್ರವಾದಿ [ಸ] ಹೇಳಿದರು: "ಇದು ಸತ್ಯವಿಶ್ವಾಸಿಗೆ ಸಿಗುವ
ತಕ್ಷಣದ ಸುವಾರ್ತೆಯಾಗಿದೆ.
[ಮುಸ್ಲಿಮ್]
ಪ್ರವಾದಿ [ಸ] ಹೇಳಿದರು: ಯಾವ ವ್ಯಕ್ತಿಯು ನರಕಕ್ಕೆ ನಿಷಿದ್ದವಾಗಿದ್ದಾನೋ
ಮತ್ತು ನರಕದ ಅಗ್ನಿಯು ಯಾರಿಗೆ ನಿಷಿದ್ದವಾಗಿದೆಯೋ ಆ ವ್ಯಕ್ತಿಯ ಬಗ್ಗೆ ನಾನು ನಿಮಗೆ ತಿಳಿಸಲೇ? ನರಕದ ಅಗ್ನಿಯು ಪ್ರತಿಯೊಬ್ಬ
ತೀವ್ರವಾದಿಯಲ್ಲದ, ಮೃದುಸ್ವಭಾವದ, ಜನರಿಗೆ ನಿಕಟವಾಗಿರುವ
ಮತ್ತು ಸರಳ ವ್ಯಕ್ತಿಯ ಮೇಲೆ ನಿಷಿದ್ದವಾಗಿದೆ.
[ಅಬೂ ದಾವೂದ್, ತಿರ್ಮಿಧಿ]
No comments:
Post a Comment