Monday, October 24, 2016
Saturday, October 22, 2016
ಸವಿನುಡಿ
ನಾನು ಹ. ಆಯಿಶಾ[ರ] ಅವರೊಡನೆ ಅಲ್ಲಾಹನ ಸಂದೇಶವಾಹಕರ[ಸ] ಚಾರಿತ್ಯ್ರದ ಬಗ್ಗೆ ವಿಚಾರಿಸಿದಾಗ ಅವರು ಹೀಗೆಂದರು: "ಪ್ರವಾದಿವರ್ಯರು[ಸ] ಅಶ್ಲೀತ ಮಾತುಗಳನ್ನಾಡುವವರಾಗಿರಲಿಲ್ಲ. ಅವರು ಬಯ್ಯುವವರಾಗಿರಲಿಲ್ಲ. ಅವರು ಪೇಟೆಯಲ್ಲಿ ಅರಚಾಟ ನಡೆಸುತ್ತಿರಲಿಲ್ಲ ಮತ್ತು ಅವರೆಂದೂ ಕೆಡುಕಿಗೆ ಕೆಡುಕಿನಿಂದ ಉತ್ತರಿಸುತ್ತರಲಿಲ್ಲ. ಬದಲಾಗಿ ಅವರು ಕ್ಷಮಿಸುತ್ತಿದ್ದರು ಮತ್ತು (ಇತರರ ತಪ್ಪುಗಳನ್ನು) ನಿರ್ಲಕ್ಷಿಸುತ್ತಿದ್ದರು. (ಅಬೂ ಅಬ್ದುಲ್ಲಾಜದ್ಲೀ [ರ])
[ತಿರ್ಮಿದಿ]
ಜೌದಾರ್ಯ
ಅಲ್ಲಾಹನ
ಸಂದೇಶವಾಹಕರು[ಸ] ಎಲ್ಲರಿಗಿಂತ ಅಧಿಕ ದಾನಶೀಲರಾಗಿದ್ದರು. ಅವರನ್ನು ಜಿಬ್ರೀಲ್‌ರು(ಅ) ಭೇಟಿ
ಮಾಡುತ್ತಿದ್ದ ರಮಝಾನ್ ತಿಂಗಳಲ್ಲಿ ಅವರ ದಾನಶೀಲತೆಯು ಇನ್ನಷ್ಟು ವೃದ್ಧಿಸುತ್ತಿತ್ತು. ರಮಝಾನ್
ತಿಂಗಳಲ್ಲಿ ಜಿಬ್ರೀಲ್‌ರು(ಅ) ಪ್ರತಿ ರಾತ್ರಿ ಅವರನ್ನು ಭೇಟಿಯಾಗುತ್ತಿದ್ದರು ಮತ್ತು ಅವರು
ಜತೆಗೂಡಿ ಕುರ್‌ಆನ್ ಒದುತ್ತಿದ್ದರು. ಆ ದಿನಗಳಲ್ಲಿ ಅಲ್ಲಾಹನ ಸಂದೇಶವಾಹಕರ ದಾನಶೀಲತೆಯು
ಬಿರುಗಾಳಿಗಿಂತ ತೀವ್ರವಾಗಿ ವೃದ್ಧಿಸುತ್ತಿತ್ತು. (ಹಝ್ರತ್ ಅಬ್ದುಲ್ಲಾಬಿನ್ ಅಬ್ಬಾಸ್(ರ))
[ಬುಖಾರಿ]
Sunday, October 9, 2016
ಜನಾಂಗವಾದ
ಪ್ರವಾದಿ[ಸ] ಹೀಗೆ ಹೇಳಿರುವರು: "ನಿಮ್ಮ ಅಜ್ಜಾನ ಕಾಲದ ಜಂಭವನ್ನು ಮತ್ತು ಪೂರ್ವಜರ ಬಗೆಗಿನ ದುರಭಿಮಾನವನ್ನು ಅಲ್ಲಾಹನು ಅಳಿಸಿ ಹಾಕಿರುವನು. ಮನುಷ್ಯನು ಒಂದೋ ದೇವಭಕ್ತ ಸತ್ಯವಿಶ್ವಾಸಿ ಯಾಗಿರುತ್ತಾನೆ. ಇಲ್ಲವೇ ದುಷ್ಟ ಧರ್ಮದ್ರೋಹಿಯಾಗಿರುತ್ತಾನೆ. ಎಲ್ಲ ಮನುಷ್ಯರೂ ಆದಮರ ಸಂತತಿಗಳು. ಆದಮರಾದರೋ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರು." (ವರದಿ: ಹ. ಅಬೂ ಹುರೈರಾ [ರ])
[ತಿರ್ಮಿದಿ]
ಗೋರಿ ಪೂಜೆ
ಪ್ರವಾದಿ[ಸ] ಅವರು ಗೋರಿಯನ್ನು ಗಾರೆಯಿಂದ ಭದ್ರಪಡಿಸುವುದನ್ನು, ಅದರ ಮೇಲೆ ಕುಳಿತಿರುವುದನ್ನು ಮತ್ತು ಅದರ ಮೇಲೆ ಕಟ್ಟಡ ನಿರ್ಮಿಸುವುದನ್ನು ನಿಷೇಧಿಸಿರುವರು. (ವರದಿ: ಹಝ್ರತ್ ಜಾಬಿರ್ [ರ])
[ಮುಸ್ಲಿಮ್]
ಹಝ್ರತ್ ಅಲೀ [ರ] ನನ್ನನ್ನು ಕರೆದು ಹೀಗೆಂದರು: "ಪ್ರವಾದಿವರ್ಯರು [ಸ] ನನ್ನನ್ನು ಯಾವ ಕಾರ್ಯಕ್ಕಾಗಿ ಕಳುಹಿಸಿದ್ದರೋ ಅದೇ ಕಾರ್ಯಕ್ಕಾಗಿ ನಾನು ನಿಮ್ಮನ್ನು ಕಳುಹಿಸಲೇ? ಯಾವ ವಿಗ್ರಹವನ್ನೂ ಅಳಿಸದೆ ಮತ್ತು ಯಾವುದೇ ಎತ್ತರದ ಗೋರಿಯನ್ನು ನೆಲಸಮಗೊಳಿಸದೆ ಬಿಡಬೇಡಿ." (ಅಬೂ ಹಯ್ಯಾಜ್ ಅಸದೀ [ರ])
[ಮುಸ್ಲಿಮ್]
ಪ್ರವಾದಿ [ಸ] ಮರಣ ಶಯ್ಯೆಯಲ್ಲಿದ್ದಾಗ ಹೀಗೆ ಹೇಳಿರುವರು: "ಯಹೂದಿಗಳು ಮತ್ತು ಕ್ರೈಸ್ತರ ಮೇಲೆ ಅಲ್ಲಾಹನ ಶಾಪವಿರಲಿ. ಅವರು ತಮ್ಮ ಪ್ರವಾದಿಗಳ ಗೋರಿಗಳನ್ನು ಸಾಷ್ಟಾಂಗವೆರಗುವ ಸ್ಥಳಗಳಾಗಿ ಮಾಡಿಕೊಂಡಿರುವರು. (ಹಝ್ರತ್ ಆಯಿಶಾ [ರ])
[ಬುಖಾರಿ]
ಅಬೂ ಹುರೈರಾ(ರ) ರಿಂದ ವರದಿ: ಪ್ರವಾದಿ(ಸ.ಅ)ಹೇಳಿದರು: ನನ್ನ ಗೋರಿಯನ್ನು ಉತ್ಸವದ ಸ್ಥಳವನ್ನಾಗಿ ಮಾಡಬೇಡಿ. ಆದರೆ ನನ್ನ ಮೇಲೆ ಸ್ವಲಾತ್ ಹೇಳಿರಿ. ನೀವೆಲ್ಲಿದ್ದರೂ ನಿಮ್ಮ ಸ್ವಲಾತ್ ನನಗೆ ತಲುಪುವುದು.
[ಅಬೂ ದಾವೂದ್]
ಶಿರ್ಕ್ ವಿನಾಶಕಾರಿ
ಪ್ರವಾದಿ[ಸ] ಹೀಗೆ ಹೇಳಿರುವರು: "ಒಬ್ಬನು ಅಲ್ಲಾಹನ ಜೊತೆ ಯಾರನ್ನೂ ಭಾಗೀದಾರರಾಗಿ ಮಾಡಿರದ ಆ ಶ್ಥಿತಿಯಲ್ಲಿ ಅಲ್ಲಾಹನನ್ನು ಭೇಟಿಯಾದರೆ ಅವನು ಸ್ವರ್ಗವನ್ನು ಪ್ರವೇಶಿಸುವನು. ಒಬ್ಬನು ಅಲ್ಲಾಹನ ಜೊತೆ ಇತರ ಯಾರನ್ನಾದರೂ ಭಾಗೀದಾರರಾಗಿ ಮಾಡಿ ಆ ಸ್ಥಿತಿಯಲ್ಲಿ ಅಲ್ಲಾಹನನ್ನು ಭೇಟಿಯಾದರೆ ಅವನು ನರಕವನ್ನು ಪ್ರವೇಶಿಸುವನು. (ವರದಿ: ಹಝ್ರತ್ ಜಾಬಿರ್ ಬಿನ್ ಅಬ್ದುಲ್ಲಾ [ರ])
[ಮುಸ್ಲಿಮ್]
ಅತಿ ದೊಡ್ಡ ಪಾಪ
ನಾನು ಪ್ರವಾದಿವರ್ಯರೊಡನೆ [ಸ] "ಅತಿ ದೊಡ್ದ ಪಾಪ ಯಾವುದು?" ಎಂದು ಪ್ರಶ್ನಿಸಿದೆ. ಅದಕ್ಕವರು "ನೀನು, ಸೃಷ್ಟಿಸಿದಂತಹ ಅಲ್ಲಾಹನಿಗೆ ಇತರರನ್ನು ಸರಿಸಮಾನರೆಂದು ಪರಿಗಣೆಸುವುದು" ಎಂದು ಉತ್ತರಿಸಿದರು. "ಆ ಬಳಿಕ ಯಾವುದು?" ಎಂದು ನಾನು ಪ್ರಶ್ನಿಸಿದೆ. ಅದಕ್ಕವರು "ನೀನು, ನಿನ್ನ ಆಹಾರದಲ್ಲಿ ಪಾಲುದರರಾಗುವರೆಂಬ ಭೀತಿಯಿಂದ ನಿನ್ನ ಮಕ್ಕಳನ್ನು ಕೊಲ್ಲುವುದು" ಎಂದು ಉತ್ತರಿಸಿದರು. "ಆ ಬಳಿಕ ಯಾವುದು?" ಎಂದು ಕೇಳಿದೆ. ಅದಕ್ಕತ್ತರವಾಗಿ ಅವರು "ನಿನ್ನ ನೆರೆಯವನ ಪತ್ನಿಯೊಂದಿಗೆ ವ್ಯಭಿಚಾರ ಮಾಡುವುದು" ಎಂದರು. (ವರದಿ: ಹಝ್ರತ್ ಅಬ್ದುಲ್ಲಾ [ರ])
[ಬುಖಾರಿ]
Saturday, October 8, 2016
Monday, October 3, 2016
ಸಲಾಮ್ ಹೇಳುವುದರ ಪ್ರತಿಫಲ
ಇಮ್ರಾನುಬ್ ಹುಸೈನ್'ರಿಂದ ವರದಿ: "ಒಬ್ಬರು ಪ್ರವಾದಿ [ಸ]ರ ಬಳಿ ಬಂದು ಅಸ್ಸಲಾಮು ಅಲೈಕುಮ್ (ನಿಮಗೆ ಶಾಂತಿಯಿರಲಿ) ಎಂದು ಹೇಳಿದಾಗ ಅವರು [ಸ]ಸಲಾಮನ್ನು ಹಿಂತಿರುಗಿಸಿದರು. ಬಳಿಕ ಕುಳಿತುಕೊಂಡು 'ಹತ್ತು' ಎಂದರು. ಇನ್ನೊಬ್ಬರು ಬಂದು 'ಅಸ್ಸಲಾಮು ಅಲೈಕುಮ್ ವ ರಹ್ಮತುಲ್ಲಾಹ್' (ನಿಮಗೆ ಶಾಂತಿ ಹಾಗೂ ಅಲ್ಲಾಹನ ಕರುಣೆಯುಂಟಾಗಲಿ) ಎಂದಾಗ ಅವರು [ಸ] ಪ್ರತಿ ಸಲಾಮ್ ಹೇಳಿ ಇಪ್ಪತ್ತು ಎಂದರು. ಬಳಿಕ ಮತ್ತೊಬ್ಬರು ಬಂದು ಅಸ್ಸಲಾಮು ಅಲೈಕುಮ್ ವ ರಹ್ಮತುಲ್ಲಾಹಿ ವ ಬರಕಾತುಹು' (ನಿಮಗೆ ಶಾಂತಿ, ಅಲ್ಲಾಹನ ಕರುಣೆ ಮತ್ತು ಅವನ ಅನುಗ್ರಹವುಂಟಾಗಲಿ) ಎಂದಾಗ ಅವರು [ಸ] ಪ್ರತಿ ಸಲಾಮ್ ಹೇಳಿ ಮೂವತ್ತು ಎಂದರು.
[ತಿರ್ಮಿದಿ, ಬೈಹುಕಿ]
ಪರೋಕ್ಷದ ಐದು ಕೀಲಿಕೈಗಳು
ಇಬ್ನು ಉಮರ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ಪರೋಕ್ಷದ ಐದು ಕೀಲಿಕೈಗಳಿವೆ. ಅದನ್ನು ಅಲ್ಲಾಹನ ಹೊರತು ಯಾರು ಬಲ್ಲವರಿಲ್ಲ.
1. ನಾಳೆ ಏನಾಗುವುದೆಂದು ಯಾರಿಗೂ ತಿಳಿಯದು.
2. ಗರ್ಭದೋಳಗೆ ಏನಿರುವುದು,
3. ನಾಳೆ ತಾನು ಮಾಡುವೆನು,
4. ಯಾವ ಭೂಭಾಗದಲ್ಲಿ ಮರಣ ಹೊಂದುವೆನು, ಮತ್ತು
5. ಮಳೆ ಯಾವಾಗ ಬರುವುದು ಎಂಬುದು ಯಾರಿಗೂ
ತಿಳಿದಿರುವುದಿಲ್ಲ.
[ಸಹೀಹ್ ಬುಖಾರಿ]
ಮುಸ್ಲಿಮರು ಹಜರುಲ್ ಅಸ್ಪದ್‌ಗೆ ಆರಾಧನೆ ಮಾಡುವುದಿಲ್ಲ
ಉಮರ್ ಬಿನ್ ಖತಾಬ್(ರ) ಹೇಳಿಕೆ: ಪ್ರವಾದಿ ಯವರ ಅನುಯಾಯಿಯಾಗಿದ್ದ ಹಾಗೂ 2ನೇ ಖಲೀಫರಾಗಿದ್ದ ಉಮರ್ ಬಿನ್ ಖತಾಬ್, ಕಅಬಾದ ಕಪ್ಪು ಶಿಲೆ( ಹಜರುಲ್ ಅಸ್ಪದ್) ಬಗ್ಗೆ ಹೀಗೆ ಹೇಳಿರುವರು: "ನೀನು ಲಾಭವೂ, ನಷ್ಟವೂ ಮಾಡಲಾಗದ ಕೇವಲ ಒಂದು ಕಲ್ಲೆಂದು ನಾನು ಅರಿತಿರುವೆನು. ಪ್ರವಾದಿ(ಸ) ವರ್ಯರು ನಿನ್ನನ್ನು ಮುಟ್ಟುವುದನ್ನು (ಚುಂಬಿಸುವುದನ್ನು) ನೋಡಿರದಿದ್ದಲ್ಲಿ. ನಾನೂ ನಿನ್ನನ್ನು ಮುಟ್ಟುವುದೂ(ಚುಂಬಿಸುವುದು) ಮಾಡುತ್ತಿರಲಿಲ್ಲ."
[ಬುಖಾರಿ]
Friday, September 23, 2016
ಪಥಭ್ರಷ್ಟ ನಂಭಿಕೆಗಳು
ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು: ಆದಮನ ಪುತ್ರನು ನನ್ನನ್ನು ನಿರಾಕರಿಸುತ್ತಾನೆ. ಅದು ಅವನಿಗೆ ಭೂಷಣವಲ್ಲ. ಅವನು ನನ್ನನ್ನು ಬಯ್ಯುತ್ತಾನೆ. ಅದು ಅವನಿಗೆ ಭೂಷಣವಲ್ಲ. ಅವನು ನನ್ನನ್ನು ನಿರಾಕರಿಸುವುದು ಹೇಗೆಂದರೆ - ಆತ ನನ್ನನ್ನು ಮರಣಾನಂತರ ಖಂಡಿತ ಜೀವಂತ ಗೊಳಿಸಲಾರನು. ನನ್ನನ್ನು ಪ್ರಥಮ ಸಲ ಸೃಷ್ಟಿಸಿದಂತೆ ಪ್ರಥಮ ಸಲ ಸೃಷ್ಟಿಸುವುದು ಅವನನ್ನು ಜೀವಂತ ಗೊಳಿಸುವುದಕ್ಕಿಂತ ಸುಲಭವಲ್ಲ ಎನ್ನುವುದಾಗಿದೆ. ನನ್ನನ್ನು ಬಯ್ಯುವುದು ಹೇಗೆಂದರೆ - ಅಲ್ಲಾಹನು ಮಗನನ್ನು ಹೊಂದಿದ್ದಾನೆ ಎನ್ನುವುದಾಗಿದೆ. ವಾಸ್ತವದಲ್ಲಿ ನಾನು ಏಕೈಕನು ನಿರಪೇಕ್ಷನೂ ಆಗಿರುವೆನು. ನನಗೆ ಯಾವ ಪುತ್ರನೂ ಇಲ್ಲ ಮತ್ತು ನಾನು ಯಾರ ಪುತ್ರನೂ ಅಲ್ಲ. ನನಗೆ ಸರಿಸಮಾನರೂ ಯಾರೂ ಇಲ್ಲ. ಇಬ್ನು ಅಬ್ಬಾಸ್ [ರ] ಅವರ ವರದಿಯಲ್ಲಿ ಈ ರೀತಿಯಿದೆ - ಅವನು ನನ್ನನ್ನು ಬಯ್ಯುವುದು ಹೇಗೆಂದರೆ - ನನಗೆ ಮಗನಿದ್ದಾನೆ ಎನ್ನುವುದಾಗಿದೆ. ನಾನು ಯಾರನ್ನಾದರೂ ನನ್ನ ಪತ್ನಿ ಅಥವಾ ಪುತ್ರನಾಗಿಸುವುದರಿಂದ ಪರಿಶುದ್ದನಾಗಿರುವೆನು.
[ಬುಖಾರಿ]
ಪ್ರವಾದಿವರ್ಯರ[ಸ] ವಿಶೇಷತೆಗಳು
ಪ್ರವಾದಿವರ್ಯರು[ಸ] ಹೀಗೆ ಹೇಳಿರುವರು: "ಇತರ ಪ್ರವಾದಿಗಳಿಗೆ ಹೋಲಿಸಿದರೆ ನನಗೆ ಆರು ವಿಷಯಗಳಿಲ್ಲಿ ಶ್ರೇಷ್ಠತೆಯನ್ನು ದಯಪಾಲಿಸಲಾಗಿದೆ. ನನಗೆ ವಿಶಾಲಾರ್ಥದ ಸಮಗ್ರ ವಚನಗಳನ್ನು ನೀಡಲಾಗಿದೆ. ವರ್ಚಸ್ಸಿನ ಮೂಲಕ ನನಗೆ ಸಹಾಯ ಮಾಡಲಾಗಿದೆ. ಗನೀಮತ್ (ಯುದ್ಧದಿಂದ ಬಂದ) ಸಂಪತ್ತನ್ನು ನನ್ನ ಪಾಲಿಗೆ ಧರ್ಮಬದ್ಧಗೊಳಿಸಲಾಗಿದೆ. ನನ್ನ ಪಾಲಿಗೆ ಸಂಪೂರ್ಣ ಭೂಮಿಯನ್ನು ಪವಿತ್ರವಾಗಿ ಹಾಗೂ ಆರಾಧನಾಲಯವಾಗಿ ಮಾಡಲಾಗಿದೆ. ನನ್ನನ್ನು ಎಲ್ಲ ಸೃಷ್ಟಿಗಳ ಕಡೆಗೆ ಸಂದೇಶವಾಹಕನಾಗಿ ಕಳುಹಿಸಲಾಗಿದೆ ಮತ್ತು ನನ್ನೊಂದಿಗೆ ಪ್ರವಾದಿಗಳ ಸರಣೆಯನ್ನು ಮುಕ್ತಾಯಗೊಳಿಸಲಾಗಿದೆ. (ಹಝ್ರತ್ ಅಬೂ ಹುರೈರಾ [ರ])
[ಮುಸ್ಲಿಮ್]
ವಿಶ್ವವಿಮೋಚಕ
ಪ್ರವಾದಿ[ಸ] ಹೀಗೆ ಹೇಳಿರುವರು: "ನನ್ನ ಮತ್ತು ನಿಮ್ಮ ಉದಾಹರಣೆ ಹೇಗಿದೆಯೆಂದರೆ, ಒಬ್ಬ ವ್ಯಕ್ತಿ ಹೊತ್ತಿಸಿದಾಗ ಪತಂಗಗಳು ಮತ್ತು ಹಾತೆಗಳು ಬಂದು ಅದರಲ್ಲಿ ಬೀಳತೊಡಗುತ್ತದೆ. ಅವನು ಅವುಗಳನ್ನು ದೂರ ಅಟ್ಟುತ್ತಿದ್ದಾನೆ. ನಾನು ಕೂಡಾ ನಿಮ್ಮ ಸೊಂಟ ಹಿಡಿದು ನಿಮ್ಮನ್ನು (ನರಕದ) ಅಗ್ನಿಯಿಂದ ದೂರ ಸರಿಸುತ್ತಿದ್ದೇನೆ. ನೀವಾದರೋ ನನ್ನ ಕೈಯಿಂದ ತಪ್ಪಿಸಿಕೊಂಡು ಹೋಗುತ್ತಿದ್ದೀರಿ. (ಹಝ್ರತ್ ಜಾಬಿರ್ [ರ])
[ಮುಸ್ಲಿಮ್]
ಪ್ರವಾದಿ
[ಸ] ಹೇಳಿದರು: ನನ್ನ ಮತ್ತು ಯಾವ ವಸ್ತುವಿನ ಜೊತೆ ಅಲ್ಲಾಹನು ನನ್ನನ್ನು ಕಳುಹಿಸಿದನೋ ಅದರ
ಉಪಮೆಯು ಒಬ್ಬ ವ್ಯಕ್ತಿಯಂತಿದೆ. ಅವನು ತನ್ನ ಜನಾಂಗದ ಬಳಿ ಬಂದು ಹೀಗೆ ಹೇಳಿದನು - ಓ ನನ್ನ
ಜನಾಂಗದ ಜನರೇ! ನಾನು (ನಿಮ್ಮ ಶತ್ರುಗಳ) ಒಂದು ಸೈನ್ಯವನ್ನು ಕಣ್ಣಾರೆ ಕಂಡಿದ್ದೇನೆ. ನಾನು
ಸ್ಪಷ್ಟ ಎಚ್ಚರಿಕೆ ನೀಡುವವನಾಗಿದ್ದೇನೆ. ನೀವು ವಿಮೋಚನೆಯ ದಾರಿ ಕಂಡುಕೊಳ್ಳಿ. ಅವನ ಜನಾಂಗದ
ಕೆಲವರು ಅವನ ಮಾತನ್ನು ನಂಬಿದರು, ತಮ್ಮ
ಮನೆಗಳಿಂದ ರಾತ್ರಿಯೇ ಹೊರಟು ವಿಮೋಚನೆ ಹೊಂದಿದರು. ಜನಾಂಗದ ಕೆಲವರು ಅವರ ಮಾತನ್ನು ನಂಬಲಿಲ್ಲ.
ಮನೆಯಲ್ಲೇ ಇದ್ದು ಬಿಟ್ಟರು. ಬೆಳಗಾಗುತ್ತಲೇ ಆ ಸೈನ್ಯವು ಅವರ ಮೇಲೆ ದಾಳಿ ಮಾಡಿ ಅವರನ್ನು
ನಾಶಮಾಡಿತು. ಅವರನ್ನು ಸಮೂಲ ನಾಶ ಮಾಡಿತು. ಇದುವೇ ನನ್ನ ಮಾತನ್ನು ನಂಬಿ ನಾನು ತಂದ ಧರ್ಮದ
ಅನುಸರಣೆಯನ್ನು ಕೈಗೊಂಡವನ ಉಪಮೆ. ನನ್ನನ್ನು ಅನುಸರಿಸದೆ ಇರುವ ಮತ್ತು ನಾನು ತಂದ ಸತ್ಯವನ್ನು ನಿರಾಕರಿಸಿದವನ
ಉಪಮೆಯೂ ಇದುವೆ. (ವರದಿ: ಹ. ಅಬೂ ಮೂಸಾ [ರ])
[ಬುಖಾರಿ, ಮುಸ್ಲಿಮ್]
ಸತ್ಯವಿಶ್ವಾಸದ ಪರಿಣಾಮಗಳು
ಪ್ರವಾದಿ[ಸ] ಹೀಗೆ ಹೇಳಿರುವರು: "ಈಮಾನ್‌ಗೆ (ಸತ್ಯವಿಶ್ವಾಸಕ್ಕೆ) ಎಪ್ಪತ್ತಕ್ಕಿಂತ ಹೆಚ್ಚು ಶಾಖೆಗಳಿವೆ. ಈ ಪೈಕಿ ಲಾ ಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ) ಎಂದುಚ್ಚರಿಸುವುದು ಅತ್ಯಂತ ಶ್ರೇಷ್ಠ ಶಾಖೆಯಾಗಿದೆ ಮತ್ತು ರಸ್ತೆಯಲ್ಲಿರುವ ಕಂಟಕವನ್ನು ನಿವಾರಿಸುವುದು ಕನಿಷ್ಠ ಮಟ್ಟದ ಶಾಖೆಯಾಗಿದೆ ಹಾಗೂ ಲಜ್ಜೆಯು ಈಮಾನಿನ ಒಂದು (ಪ್ರಮುಖ) ಶಾಖೆಯಾಗಿದೆ. (ಹಝ್ರತ್ ಅಬೂ ಹುರೈರಾ [ರ])
[ಮುಸ್ಲಿಮ್]
ಸತ್ಯವಿಶ್ವಾಸದ ಬೇಡಿಕೆಗಳು
ಪ್ರವಾದಿ[ಸ] ಹೀಗೆ ಹೇಳಿರುವರು: "ಅಲ್ಲಾಹನ ಮೇಲೆ ಮತ್ತು ಪರಲೋಕದ ಮೇಲೆ ವಿಶ್ವಾಸವಿರುವವನು ಮಾತಾಡಿದರೆ ಒಳ್ಳೆಯ ಮಾತನ್ನೇ ಆಡಬೇಕು, ಇಲ್ಲವಾದರೆ ಮೌನವಾಗಿರಬೇಕು. ಅಲ್ಲಾಹನ ಮೇಲೆ ಮತ್ತು ಪರಲೋಕದ ಮೇಲೆ ವಿಶ್ವಾಸವುಳ್ಳವನು ತನ್ನ ನೆರೆಯವರಿಗೆ ಕಿರುಕುಳ ನೀಡಬಾರದು. ಅಲ್ಲಾಹನ ಮೇಲೆ ಮತ್ತು ಪರಲೋಕದ ಮೇಲೆ ವಿಶ್ವಾಸವಿರುವಾತನು ತನ್ನ ಅತಿಧಿಯನ್ನು ಗೌರವಿಸಬೇಕು. (ಹಝ್ರತ್ ಅಬೂ ಹುರೈರಾ [ರ])
[ಬುಖಾರಿ]
Subscribe to:
Posts (Atom)