Thursday, July 25, 2013

ಏಕದೇವ ವಿಶ್ವಾಸ

ಏಕದೇವ ವಿಶ್ವಾಸವು ಇಸ್ಲಾಮಿನ ಮೂಲಭೂತ ವಿಶ್ವಾಸಗಳ ಪೈಕಿ ಮೊದಲನೆಯದಾಗಿದೆ. ಜಗತ್ತು ಮತ್ತದರಲ್ಲಿರುವ ಸಕಲವಸ್ತುಗಳೂ ಏಕ ಸೃಷ್ಟಿಕರ್ತನ ಸೃಷ್ಟಿಗಳಾಗಿವೆ, ಸಮಸ್ತ ವಿಶ್ವದ ಪರಿಪಾಲಕನೂ, ಒಡೆಯನೂ, ಅಧಿಪತಿಯೂ ಅವನೇ ಆಗಿರುತ್ತಾನೆ. ಆದುದರಿಂದ ಅವನೊಬ್ಬನೇ ಎಲ್ಲ ವಿಧ ಆರಾಧನೆ ಮತ್ತು ಅರ್ಪಣೆಗಳಿಗೆ ಅರ್ಹನಾದವನು, ಅವನ ಹೊರತು ಪೂಜೆ ಮತ್ತು ಆರಾಧನೆಗೆ ಅರ್ಹನಾದವನು ಯಾರೂ ಇಲ್ಲ. ಅವನಲ್ಲದೆ ದಾಸ್ಯ ಮತ್ತು ಅನುಸರಣೆಗೆ ಯೋಗ್ಯ ಯಾರೂ ಇಲ್ಲ. ಅವನೊಂದಿಗೆ ಭಾಗೀದಾರನಾಗಿ ಯಾರೂ ಇಲ್ಲ. ಎಲ್ಲರೂ ಆತನ ಆಶ್ರಿತರು, ಅವನಿಂದ ಸಹಾಯ ಯಾಚಿಸಲು ನಿರ್ಬಂಧಿತರು. ಆದ್ದರಿಂದ ಮಾನವ ಕಣ್ಣಿಗೆ ಆತನನ್ನು ನೋಡಲು ಸಾಧ್ಯವಿಲ್ಲ . ಪ್ರವಾದಿ ಇಬ್ರಾಹೀಂ() ಘಟನೆಯನ್ನು ಲ್ಲೇಖಿಸಿ ಪವಿತ್ರ ಕುರ್ಆನ್ ಹೇಳುತ್ತದೆ:

"ನಾವು ಇಬ್ರಾಹೀಮರಿಗೆ ಇದೇ ರೀತಿಯಲ್ಲಿ ಭೂಮಿ-ಆಕಾಶಗಳ ಸಾಮ್ರಾಜ್ಯ ವ್ಯವಸ್ಥೆಯನ್ನು ತೋರಿಸಿ ಕೊಡುತ್ತಿದ್ದೆವು. ಅವರು ದೃಢ ವಿಶ್ವಾಸವುಳ್ಳವರಾಗ ಬೇಕೆಂದು. ಒಮ್ಮೆ ರಾತ್ರಿ ಕಾಲವು ಅವರನ್ನಾವರಿಸಿದಾಗ ಅವರೊಂದು ನಕ್ಷತ್ರವನ್ನು ಕಂಡರು. 'ಇದು ನನ್ನ ಪ್ರಭು ಎಂದರು. ಆದರೆ ಅದು ಅಸ್ತಮಿಸಿದಾಗ 'ನಾನು ಅಸ್ತಮಿಸುವವರಿಗೆ ಮಾರು ಹೋಗುವುದಿಲ್ಲ 'ಎಂದರು. ಅನಂತರ ಚಂದ್ರವು ಪ್ರಕಾಶಿಸುತ್ತಿರುವುದನ್ನು ಕಂಡಾಗ 'ಇದು ನನ್ನ ಪ್ರಭು' ಎಂದರು. ಆದರೆ ಅದೂ ಮುಳುಗಿದಾಗ' ನನ್ನ ಪ್ರಭು ನನಗೆ ಮಾರ್ಗದರ್ಶನ ವನ್ನೀಯದಿರುತ್ತಿದ್ದರೆ ನಾನೂ ಪಥಭ್ರಷ್ಟರಲ್ಲಾಗುತ್ತಿದ್ದೆ ಎಂದರು' ತರುವಾಯ ಸೂರ್ಯನನ್ನು ಪ್ರಕಾಶಮಯವಾಗಿ ಕಂಡಾಗ' ಇದು ನನ್ನ ಪ್ರಭು, ಇದು ಎಲ್ಲಕ್ಕಿಂತ ದೊಡ್ಡದಾಗಿದೆ' ಎಂದರು. ಆದರೆ ಅದೂ ಅಸ್ತಮಿಸಿದಾಗ ಇಬ್ರಾಹೀಮರು ಉದ್ಗರಿಸಿದರು:

", ನನ್ನ ಜನಾಂಗ ಬಾಂಧವರೆ ನೀವು ಯಾವುದನ್ನೆಲ್ಲಾ ದೇವನೊಂದಿಗೆ ಸಹಭಾಗಿಗಳನ್ನಾಗಿಸುತ್ತೀರಿ ಅವುಗಳಿಂದ ನಾನು ವಿರಕ್ತನಾಗುವೆನು. (ನಂತರ ಹೇಳಿದರು) ನಾನು ಏಕ ನಿಷ್ಥೆಯಿಂದ ನನ್ನ ಮುಖವನ್ನು ಭೂಮಿ-ಆಕಾಶಗಳನ್ನು ಸೃಷ್ಟಿಸಿದವನ ಕಡೆಗೆತಿರುಗಿಸಿದೆನು. ನಾನು ಎಷ್ಟುಮಾತ್ರಕ್ಕೂ ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿ ಮಾಡುವವರಲ್ಲಿ ಸೇರಿದವನಲ್ಲ"
(ಪವಿತ್ರ ಕುರ್ಆನ್)


No comments:

Post a Comment