Thursday, July 25, 2013
ಅಲ್ಲಾಹನನ್ನು ಮಾತ್ರ ಕರೆದು ಪ್ರಾರ್ಥಿಸಿರಿ
“ಓ ಪೈಗಂಬರರೇ, ನನ್ನ ದಾಸರು ನಿಮ್ಮೊಡನೆ ನನ್ನ ಬಗ್ಗೆ ಕೇಳಿದರೆ, ನಾನು ಅವರಿಗೆ ನಿಕಟನಾಗಿದ್ದೇನೆಂದೂ ಪ್ರಾರ್ಥಿಸುವವನು ನನ್ನನ್ನು ಪ್ರಾರ್ಥಿಸಿದಾಗ ಅವನ ಪ್ರಾರ್ಥನೆಯನ್ನು ಆಲಿಸುತ್ತೇನೆಂದೂ ಅದಕ್ಕೆ ಉತ್ತರಿಸುತ್ತೇನೆಂದೂ ಅವರಿಗೆ ಹೇಳಿರಿ…”
ಲುಕ್ಮಾನರು ತನ್ನ ಮಗನಿಗೆ ಹೀಗೆ ಉಪದೇಶಿಸುತ್ತಾರೆ, “ಮಗನೇ
ಅಲ್ಲಾಹ ನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡಬೇಡ. ನಿಜವಾಗಿಯೂ ಶಿರ್ಕ್ ಮಹಾ ಅಕ್ರಮವಾಗಿದೆ.”
“ಅಲ್ಲಾಹನು ಉತ್ತಮ ನಾಮಗಳಿಗೆ ಅರ್ಹನಾಗಿದ್ದಾನೆ.
ಅವನನ್ನು ಉತ್ತಮ ನಾಮಗಳಿಂದಲೇ ಕರೆಯಿರಿ. ಅವನ ನಾಮಗಳನ್ನಿಡುವುದರಲ್ಲಿ ಅತಿರೇಕವೆಸಗುವವರನ್ನು ಬಿಟ್ಟು ಬಿಡಿರಿ. ಅವರು
ಮಾಡುವುದರ ಪ್ರತಿಫಲವನ್ನು ಅವರು ಕಂಡೇ ತೀರುವರು.”
“ಅವನು ಅಲ್ಲಾಹ್. ಅವನ ಹೊರತು ಅನ್ಯ
ದೇವನಿಲ್ಲ. ಅವನಿಗೆ ಅತ್ಯುತ್ತಮ ನಾಮಗಳಿವೆ.”
“ಓ ಪೈಗಂಬರೇ, ಇವರೊಡನೆ
ಹೇಳಿರಿ: ಅಲ್ಲಾಹ್ ಎಂದು ಕರೆಯಿರಿ ಅಥವಾ ರಹ್ಮಾನ್ (ಪರಮ ದಯಾಮಯ) ಎಂದು ಕರೆಯಿರಿ. ಯಾವ
ಹೆಸರಿನಿಂದ ಕರೆದರೂ ಅವನಿಗೆ ಎಲ್ಲವೂ ಒಳ್ಳೆಯ ನಾಮಗಳೇ ಇವೆ.”
(ಕುರಾನ್, 17: 110)
Subscribe to:
Post Comments (Atom)
No comments:
Post a Comment