Thursday, July 25, 2013

ರಂಜಾನ್ ಅಥವ ರಮಾದಾನ್

                  ರಂಜಾನ್ ಅಥವ ರಮಾದಾನ್ (ಅರೇಬಿಕ್ಭಾಷೆಯಲ್ಲಿ: رمضان ) ಇಸ್ಲಾಮ್ ಕ್ಯಾಲೆಂಡರ್ನಲ್ಲಿ ವರ್ಷದ ಒಂಬತ್ತನೇ ತಿಂಗಳು. ಸಿಯಾಮ್ ಅಥವಾ ಸೌಮ್ (ಉಪವಾಸ) ಇಸ್ಲಾಮ್ ಐದು ಕಂಬಗಳಲ್ಲಿ ನಾಲ್ಕನೆಯದು ಹಾಗೂ ರಮಾದಾನ್ ಸಮಯದಲ್ಲಿ ಉಪವಾಸ ನಡೆಯುತ್ತದೆ. ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ರಮದಾನ್ ತಿಂಗಳ ಸಂಪೂರ್ಣ ವ್ರತಾಚರಣೆಯಾಗಿದೆ. ಮಾನವಕಲ್ಯಾಣಕ್ಕಾಗಿ ಪ್ರವಾದಿ ಮುಹಮ್ಮದ್()ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರ್ಆನ್ ಅವತೀರ್ಣಗೊಂಡಿತು.ಇದರ ಗೌರವಾರ್ಹ ಪ್ರತಿವರ್ಷವೂ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು. ಪ್ರಭಾತಕಾಲದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇತರ ಸಮಯಗಳಲ್ಲಿ ಧರ್ಮಸಮ್ಮತವಾದ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ. ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ.

ಪ್ರವಾದಿ ಮುಹಮ್ಮದ್ () ಹೇಳಿರುವರು: ಪರಿಶುದ್ಧನಾದ ಅಲ್ಲಾಹನು ಹೇಳುತ್ತಾನೆ,
ಮನುಷ್ಯ ಮಾಡುವ ಕರ್ಮಗಳೆಲ್ಲಾ  ಅವನಿಗಾಗಿಯೇ ಆಗಿರುತ್ತದೆ. ಆದರೆ ಉಪವಾಸ ಅದರಿಂದ ಹೊರತಾಗಿದೆ. ಅದು ಕೇವಲ ನನಗಾಗಿ ಮಾಡಿದ ಕರ್ಮ ಆದ್ದರಿಂದ ಅದರ ಪ್ರತಿಫಲವನ್ನೂ ಸ್ವತಃ ನಾನೇ ನೀಡುವೆನು
( ಅಲ್ ಬುಖಾರಿ)

ಉಪವಾಸಿಗನ ಬಾಯಿಯಿಂದ ಬರುವ ದುರ್ವಾಸನೆ ಅಲ್ಲಾಹನ ಬಳಿ ಕಸ್ತೂರಿ ಸುಗಂಧಕ್ಕಿಂತಲೂ ಉತ್ಕೃಷ್ಟತೆಯನ್ನು ಪಡೆದಿರುತ್ತದೆ.
(ಮುಸ್ಲಿಂ)

ಯಾರು ಅಲ್ಲಾಹನಿಗಾಗಿ ಒಂದು ದಿನದ ಉಪವಾಸ ಆಚರಿಸುತ್ತಾನೆ ಅಲ್ಲಾಹನು ಆತನನ್ನು ಎಪ್ಪತ್ತು ವರ್ಷಗಳಷ್ಟು ನರಕಾಗ್ನಿಯಿಂದ ದೂರ ಮಾಡುತ್ತಾನೆ.
(ಮುಸ್ಲಿಂ)

ಪ್ರವಾದಿ ಮುಹಮ್ಮದ್ () ಹೇಳಿರುವರು: ” ಯಾರು ಪೂರ್ಣ ನಂಬಿಕೆ ಮತ್ತು ಪ್ರತಿಫಲಾಪೇಕ್ಷೆಯೊಂದಿಗೆ  ಉಪವಾಸ ಆಚರಿಸುತ್ತಾನೆ  ಆತನ ಗತಕಾಲದ ಎಲ್ಲ ಪಾಪಗಳು ಕ್ಷಮಿಸಲ್ಪಡುವುದು. ”
( ಅಲ್ ಬುಖಾರಿ)

No comments:

Post a Comment