Thursday, August 1, 2013

ಇಸ್ಲಾಂ ಧರ್ಮದ ಕುರಿತು ಒಂದು ನೋಟ

 ವಿಶ್ವದ ಅತಿ ಮುಖ್ಯ ಧರ್ಮಗಳಲ್ಲಿ ಇಸ್ಲಾಂ ಧರ್ಮವೂ ಒಂದು.ಇಸ್ಲಾಂ ಪದಕ್ಕೆ ವಿಧೇಯನಾಗು,ಭಗವಂತನ ಇಚ್ಛೆಗೆ ಅನುಗುಣವಾಗಿ ಆತ್ಮ ಸಮರ್ಪಣೆ ಮಾಡು ಮುಂತಾಗಿ ಅರ್ಥವಿದೆ. ಇಸ್ಲಾಂ ಧರ್ಮದ ಮುಖ್ಯ ಸಂದೇಶವೆಂದರೆ ಅಲ್ಲಾಹ್ ಒಬ್ಬನೇ ಎಂದರೆ ಭಗವಂತ ಒಬ್ಬನು ಮಾತ್ರ. ಅವನೇ ಈ ವಿಶ್ವದ ಸೃಷ್ಟಾರ; ಅವನೇ ರಕ್ಷಕನೂ ಆಗಿದ್ದಾನೆ. ಏಕ ದೈವತ್ವ ಇಸ್ಲಾಂ ಧರ್ಮದ ಮೂಲ ಮಂತ್ರ. ಮಹಮದ್ ನಬಿ ಈ ಧರ್ಮದ ಮುಖ್ಯ ಪ್ರಬೋದಕ. ವಿವಿಧ ಪ್ರಬೋದಕರ ಸಂದೇಶವನ್ನು ಒಳಗೊಂಡಿರುವ ಪವಿತ್ರ ಗ್ರಂಥ ಖುರಾನ್. ಮಹಮದ್ ನಬಿ ಈ ಧರ್ಮದ ಸ್ಥಾಪಕನಲ್ಲ ಅವನು ಪ್ರಬೋದಕರಲ್ಲಿ ಕೊನೆಯವನು. ಇಸ್ಲಾಂ ಮತದ ಪೂರ್ಣ ರೂಪವನ್ನು ಹೊರಗೆಡವಿದವನು ಮಹಮದ್ ನಬಿ ಎಂದು ನಂಬಲಾಗಿದೆ.

No comments:

Post a Comment