ರಮದಾನ್ ಉಪವಾಸ ವ್ರತ ಕೊನೆಗೊಳ್ಳುವುದರೊಂದಿಗೆ ಈದುಲ್ ಫಿತರ್ ಆಚರಿಸಲ್ಪಡುತ್ತದೆ. ಈ ಹಬ್ಬಕ್ಕೆ ಉಪವಾಸದ ಹಬ್ಬವೆಂದೂ, ಪೆರ್ನಾಲ್ ಎಂದೂ ಹೇಳುತ್ತಾರೆ. ಅಂದು ಮುಂಜಾನೆ ನಮಾಝ್ ನಿರ್ವಹಿಸಲಾಗುವ ಸ್ಥಳಕ್ಕೆ ಹೊರಟು ನಮಾಝ್ ಆರಂಭಿಸುವ ವರೆಗೂ ತಕ್‌ಬೀರ್ ಹೇಳುವುದು ಪ್ರತ್ಯೇಕ ಸುನ್ನತ್ ಆಗಿದೆ. ತಕ್‌ಬೀರ್‌ನ ಹಲವು ರೂಪಗಳು ವರದಿಯಾಗಿದೆ. ಅದರಲ್ಲೊಂದು ಈ ರೀತಿ ಇದೆ.
ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್
ಲಾ ಇಲಾಹ ಇಲ್ಲಲ್ಲಾಹು ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ವಲಿಲ್ಲಾಹಿಲ್ ಹಮ್ದ್
ಮುಸ್ಲಿಮರು ಬಹಳ ಸಡಗರ ಸಂತೋಷಗಳಿಂದ
ಆಚರಿಸಬೇಕಾದ ಹಬ್ಬವಾಗಿದೆ ಈದುಲ್ ಫಿತರ್. ಅಂದು ಮುಂಜಾನೆ ಕಿರಿಯರು, ಹಿರಿಯರು, ಗಂಡಸರು ಮಹಿಳೆಯರೆಲ್ಲರೂ
ಸ್ನಾನ ಮಾಡಿ ಶುದ್ಧರಾಗಿ ಉತ್ತಮ ಬಟ್ಟೆ ಧರಿಸಿ ನಮಾಝ್ ಮಾಡುವ ಸ್ಥಳಕ್ಕೆ ತೆರಳಬೇಕು. ನಮಾಝ್ ಕಡ್ಡಾಯವಲ್ಲದ,
ಅಶುದ್ದೆಯುಳ್ಳ ಮಹಿಳೆಯರು ಈ ಸಡಗರದಲ್ಲಿ ಪಾಲ್ಗೊಳ್ಳಬಹುದೆಂದು ಪ್ರವಾದಿ ಮುಹಮ್ಮದ್ [ಸ] ಹೇಳಿರುವರು.
ಇಂತಹ ಮಹಿಳೆಯರು ನಮಾಝ್‌ನಲ್ಲಿ ಪಾಲ್ಗೊಳ್ಳದೆ ಖುತ್ಬಾ ಆಲಿಸುವುದು, ತಕ್ಬೀರ್, ದುಆ ಮೊದಲಾದ ಪುಣ್ಯ
ಕರ್ಮಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.
No comments:
Post a Comment