Sunday, April 29, 2018

ಸಹಾಬಿಗಳು ಪಾಂಡಿತ್ಯಗಳು


ಅಬ್ದುಲ್ಲಾ ಬಿನ್ ಉಮರ್‌[ರ]ರಿಂದ ವರದಿ: ಪ್ರವಾದಿ[ಸ]ರು ಹೇಳೀದರು: ನನ್ನ ಜನರಲ್ಲಿ ಹೆಚ್ಚು ದಯಾಶೀಲರು ಹಾಗೂ ಕರುಣೆಯುಳ್ಳವರೆಂದರೆ ಅಬೂ ಬಕರ್ ಸಿದ್ದೀಕ್ [ರ], ಅಲ್ಲಾಹನ ವಿಷಯದಲ್ಲಿ ಹೆಚ್ಚು ಕಠೋರ ನಿಲುವುಳ್ಳವರೆಂದರೆ ಉಮರ್ ಖತ್ತಾಬ್ [ರ], ಪ್ರಾಮಾಣಿಕತೆ, ವಿಶ್ವಸ್ತತೆ ಹಾಗೂ ವಿನಯವುಳ್ಳವರು ಉಸ್ಮಾನ್ ಬುನ್ ಅಫ್ಪಾನ್ [ರ], ಕಾನೂನಿನ ವಿಷಯದಲ್ಲಿ ಹೆಚ್ಚು ಮಾಹಿತಿಯುಳ್ಳವರು ಅಲಿ ಬಿನ್ ಅಬೀ ತಾಲೀಬ್ [ರ], ಕಡ್ದಾಯ ಕಾರ್ಯಗಳನ್ನು ಹೆಚ್ಚಾಗಿ ಅನುಷ್ಠಿಸುವವರು ಝೈದ್ ಬಿನ್ ಸಾಬಿತ್ [ರ], ಅತ್ಯುತ್ತಮ ಶೈಲಿಯಲ್ಲಿ ಕುರ್‌ಆನನ್ನು ಪಠಿಸುವವರು ಉಬೈಬ್‌ ಬುನ್ ಕಅಬ್ [ರ], ಕಾನೂನು ಹಾಗೂ ನಿಷೇಧಿತ ಕಾನೂನುಗಳ ಅರಿವುಳ್ಳವರು ಮುಆದ್ ಬಿನ್ ಜಬಲ್ [ರ], ವಿಶ್ವಾಸಯೋಗ್ಯ ಸಂರಕ್ಷಕರು ಅಬೂ ಉಬೈದ ಬಿನ್ ಅಲ್ ಜರ್ರ್ರಾಹ್ [ರ]
[ಅಹ್ಮದ್, ತಿರ್ಮಿದಿ]

Wednesday, April 25, 2018

ಸಂತಾನ ಪರಿಪಾಲಕರಿಗೆ 130 ಉಪದೇಶಗಳು



     1.     ತಮ್ಮ ಮಕ್ಕಳಿಗೆ ಏಕದೇವ ವಿಶ್ವಾಸ ಮತ್ತು ಅದರ ಪ್ರಮುಖ್ಯತೆಯ ಕುರಿತು ವಿವರಣೆ ಕೋಡುಬೇಕು. ಅದರ ಜೋತೆಗೆ ಶಿರ್ಕ್ ಮತ್ತು ಅದರ ದುಷ್ಪರಿಣಾಮಗಳ ಕುರಿತು ಕಲಿಸಿಕೊಡಬೇಕು.

     2.     ನನ್ನನ್ನು ಯಾಕಾಗಿ ಸೃಷ್ಟಿಸಲಾಗಿದೆ ಎಂಬುದರ ಕುರಿತು ಮತ್ತು ಇಬಾದತ್ತಿನ ಅಗತ್ಯದ ಕುರಿತು ಮಕ್ಕಳಿಗೆ ಭೊಧನೆ ನೀಡಬೇಕು.

     3.     ನರಕ ಶಿಕ್ಷೆಯ ಕುರುತು ಹೆದರಿಸುವಾಗ ಅಥವಾ ಮುನ್ನಚ್ಚರಿಗೆ ನೀಡುವಾಗ ಮಧ್ಯವ ನಿಲುವು ಪಾಲಿಸುವುದು ಅಗತ್ಯ.

     4.     ನಮಗೆ ಅನ್ನ-ಪಾನೀಯ, ವಸ್ತ್ರ-ವಸತಿ ನೀಡಿದ ಮತ್ತು ಅದಕ್ಕೂ ಮಿಗಿಲಾಗಿ ಅಲ್ಲಾಹನನ್ನು ಅನುಸರಿಸುವ ಮುಸ್ಲಿಮರನ್ನಾಗಿಸಿದ ಅಲ್ಲಾಹನನ್ನು ಪ್ರೀತಿಸಬೇಕು ಎಂಬುವುದನ್ನು ತಿಳಿಸಬೇಕು.

     5.     ಅಲ್ಲಾಹನು ಎಲ್ಲವನ್ನು ವೀಕ್ಷಿಸುವವನಾಗಿದ್ದಾನೆ ಎಂಬುವುದನ್ನು ಕಲಿಸಿಕೊಡುವುದರ ಮೂಲಕ ಏಕಾಂತದಲ್ಲಿರುವಾಗಲೂ ಪಾಪವೆಸಗುವುದರಿಂದ ಹಿಂದೆ ಸರಿಸಲು ಪ್ರಯತ್ನಿಸಬೇಕು...

     Will Continue Insha Allah